News Cafe | Mysuru Leaders Invites Siddaramaiah To Contest From Varuna Constituency | HR Ranganath | Aug 10, 2022

2022-08-10 49

ಅಲ್ಲೂ ಬೇಡ.. ಎಲ್ಲೂ ಬೇಡ.. ಇಲ್ಲೇ ಬಂದು ಬಿಡಿ... ಸಿದ್ದರಾಮಯ್ಯ ಬೆಂಬಲಿಗರು ಇಂತಹದೊಂದು ಹೊಸ ಗೇಮ್ ಪ್ಲಾನ್ ಶುರು ಮಾಡಿದ್ದಾರೆ. ಸೇಫಾದ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಕೊನೆಗೂ ವರುಣಾಕ್ಕೆ ಫಿಕ್ಸ್ ಮಾಡಿಸಲು ಬೆಂಬಲಿಗರು ಮುಂದಾದಂತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲೂ ಹೀಗೆ ಚರ್ಚೆ ಹುಟ್ಟು ಹಾಕಿದ್ದ ಸಿದ್ದರಾಮಯ್ಯ ಬೆಂಬಲಿಗರು ಆ ಕ್ಷೇತ್ರಗಳ ಪಲ್ಸ್ ಟೆಸ್ಟ್ ಮಾಡಿದ್ದರು. ಈಗ ವರುಣಾಗೆ ಬನ್ನಿ ಎಂದು ಮೈಸೂರು ನಾಯಕರು ಆಹ್ವಾನ ನೀಡ್ತಿದ್ದಾರೆ. ಇದು ಸಿದ್ದರಾಮಯ್ಯ ಬಣದ ಹೊಸ ಗೇಮ್ ಪ್ಲಾನ್ ಎನ್ನಲಾಗುತ್ತಿದೆ. ಯಡಿಯೂರಪ್ಪ ಲೈನ್ ಕ್ಲಿಯರ್ ಮಾಡಿದ ವರುಣಾವೇ ಸಿದ್ದರಾಮಯ್ಯ ಪಾಲಿಗೆ ಸೇಫ್ ಎಂದು ಮೈಸೂರು ನಾಯಕರು-ಬೆಂಬಲಿಗರು ಆಹ್ವಾನ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ, ವರುಣಾ ಕ್ಷೇತ್ರವೇ ಸಿದ್ದರಾಮಯ್ಯ ಪಾಲಿನ ಸೇಫ್ ಕ್ಷೇತ್ರ ಎಂಬ ಮಾತು ಆಪ್ತ ವಲಯದಲ್ಲಿ ಕೇಳಿಬರುತ್ತಿದೆ.

#publictv #newscafe #hrranganath